Swalpa Dukha Padi
225
250
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Swalpa Dukha Padi

by Jogi (Author),
Product Specifications
Book Description
ಪುಸ್ತಕದ ಬಗ್ಗೆ: ಸ್ವಲ್ಪ ದುಃಖಪಡಿ ಕಡು ವಿಷಾದದ ನಾಕು ಸಾಲು ಬರೆಯುತ್ತೇನೆ ಎಂದು ಕುಳಿತಾಗೆಲ್ಲ ನನ್ನೊಳಗೆ ಅಷ್ಟೇನೂ ದುಃಖವಿಲ್ಲ ಅನ್ನಿಸಿ ಬೇಜಾರಾಗುತ್ತದೆ. ಅಮ್ಮ ನನಗಾಗಿ ಕಷ್ಟಪಡುವುದನ್ನು ನೋಡಿದಾಗ ಸಂಕಟವಾಗುತ್ತಿತ್ತು, ಈಗ ಅಮ್ಮನಿಲ್ಲ. ಅಪ್ಪ ನನ್ನ ಕಾಲೇಜು ಫೀಸಿಗೆ, ಸೈಕಲ್ಲಿಗೆ, ನಾನು ಕದ್ದು ಸೇದುತ್ತಿದ್ದ ಸಿಗರೇಟಿಗೆ ದುಡ್ಡು ಹೊಂಚುವುದಕ್ಕೆ ಬೆವರು ಸುರಿಸಿ ದುಡಿಯುವುದನ್ನು ನೆನೆದು ನೋವಾಗುತ್ತಿತ್ತು. ಈಗ ಅಪ್ಪನಿಲ್ಲ. ನಮ್ಮೂರಿನ ದುಡ್ಡಿದ್ದ ಮಂದಿ ನನ್ನೆದುರು ಧೂಳೆಬ್ಬಿಸುತ್ತಾ ಕಾರಲ್ಲಿ ಓಡಾಡುವಾಗ ಕಣ್ಣೀರು ಉಕ್ಕುತ್ತಿತ್ತು. ಈಗ ನನ್ನ ಬಳಿಯೂ ಕಾರಿದೆ. ಗಾಂಧಿಜಿಯನ್ನು ಗುಂಡಿಕ್ಕಿ ಕೊಂದ ಅಧ್ಯಾಯ ಓದುವಾಗ ಮನಸ್ಸು ಮರುಗುತ್ತಿತ್ತು. ಈಗ ಗಾಂಧಿ ದಿನವೂ ಕೊಲೆಯಾಗುತ್ತಿರುತ್ತಾರೆ. ಇಂಗ್ಲಿಷ್ ಸಿನಿಮಾದ ಸಂಭಾಷಣೆ ಅರ್ಥವಾಗದೇ ಇದ್ದಾಗ, ಪಾಬ್ಲೋ ನೆರುಡನ ಪದ್ಯ ಓದಿದಾಗ, ಹದಿನೈದು ಪೈಸೆ ಕಡಿಮೆ ಕೊಟ್ಟದ್ದಕ್ಕೆ ಕಂಡಕ್ಟರ್ ಅಪರಾತ್ರಿ ಬಸ್ಸಿನಿಂದ ಇಳಿಸಿದ್ದು ನೆನಪಾದಾಗ ಕವಿಯುತ್ತಿದ್ದ ವಿಷಾದ ಈಗ ಮಾಯವಾಗಿದೆ. ದುಃಖಪಡಲು ಮೂರು ಒಳ್ಳೆಯ ಕಾರಣಗಳನ್ನು ಕೊಡು ಅಂತ ದೇವರನ್ನು ಕೇಳೋಣವೆಂದರೆ ಅವನ ಮೇಲೆ ನನಗೆ ಅಷ್ಟಾಗಿ ನಂಬಿಕೆಯಿಲ್ಲ. ನನ್ನ ಒಳಗುದಿಯನ್ನೆಲ್ಲ ಯಾರು ಯಾರೋ ಹೊತ್ತು ನಡೆದು ನನ್ನನ್ನು ದುಃಖವಿಲ್ಲದ ಅನಾಥನನ್ನಾಗಿ ಮಾಡಿದ್ದಾರೆ. ಆದರೂ
Book Specifications
ISBN-13 9788168955714
Language Kannada
Binding Paper Back
Publisher Sawanna Enterprises
Publishing Date 2026-08-23
Product Edition 1
Total Pages 240