Get this at ₹ 128Extra 5% OffAdd items worth ₹999 to the cart & get extra 5% off
Get this at ₹ 122Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ: ಸರಹದ್ದು
ದೀಪಾರವರ ಕತೆಗಳು ಎರಡು ಮುಖ್ಯ ಕಾರಣಗಳಿಗಾಗಿ ಗಮನ ಸೆಳೆಯುತ್ತವೆ. ವಲಸೆ, ಸ್ಥಳಾಂತರ,
ನಿರಾಶ್ರಿತರ ಅತಂತ್ರ ಸ್ಥಿತಿ, ದಿವಾಳಿತನ, ಆಸರೆಯ ನೆಲೆಯನ್ನು ಕಳೆದುಕೊಂಡವರ ನ್ನೊಳಗೊಂಡ
ಚರಿತ್ರೆಯ ಒತ್ತಡಗಳಿಂದ ರೂಪುಗೊಳ್ಳುತ್ತಿರುವ ಸಾಮಾಜಿಕ ರೂಪಾಂತರ ಪ್ರಕ್ರಿಯೆ ಒಂದಾದರೆ, ರೂಪಾಂತರ
ಪ್ರಕ್ರಿಯೆಯ ಒಡಲೊಳಗೆ ದೈನಿಕ ದುಡಿಮೆಯ ದೈವಿಕ ನೂಲುಗಳಿಂದ ಬದುಕನ್ನು ನೇಯುತ್ತಿರುವವರ ಕನಸು
ವಾಸ್ತವದಲ್ಲಿ ನಿಜವಾಗದಿದ್ದರೂ ಒಳ್ಳೆಯತನವನ್ನು ಬಿಡದಿರದ ಸತ್ಯ ಇನ್ನೊಂದು. ಮನುಷ್ಯ ಸಹಜ ಆಸೆ,
ಅಸೂಯೆ, ಸಣ್ಣತನ, ಅಸಹನೆ ಮತ್ತು ಸ್ವಾಭಿಮಾನದ ಹಟದ ದುರ್ಬಲ ಕ್ಷಣದ ತಲ್ಲಣಗಳ ತುದಿಯಲ್ಲಿ
ಪಾತ್ರಗಳು ಅಸ್ತಿತ್ವಕ್ಕೆ ಹೋರಾಡುವವರ ಮನುಷ್ಯತ್ವದ ಮಾಂತ್ರಿಕ ಸ್ಪರ್ಶಕ್ಕೆ ತೆರೆದುಕೊಂಡು
ಬಿಡುಗಡೆಗೊಳ್ಳುವ ಅಪೂರ್ವ ಮುಖಾಮುಖಿ ಜರುಗುವುದು ಕಥನದ ವಿಶೇಷವಾಗಿದೆ.
ಕೂಳಿಗಾಗಿ ಸಮುದ್ರದ ಬಿಸಿಲು ಗಾಳಿಗೆ ಬೆವರಿ ಬೇಯುತ್ತಲೇ ಇರುವ, ಎಲ್ಲೆಲ್ಲೂ ಕನ್ನಡ ಶಾಲೆಯ
ಅಕ್ಕೋರ ನೆರಳುಗಳೇ ಅಲೆದಾಡುವ, ಒಲೆಯ ಮಡಕೆ ಗಂಜಿ ಕಂಪಿನ, ಮಣ್ಣು ಒಳ ಸಾರಿಸಿದ ಸಗಣಿ ವಾಸನೆಯ,
ಮೀನು ಪಳದಿ ಪರಿಮಳದ, ಕೋಳಿ ಪಿಟ್ಟಿಯ, ನೆನಪುಕ್ಕಿಸುವ ಸೊಕ್ಕಿನ ಮಳೆಯ, ಅಂಗಡಿಯ ಕಂದೀಲು ಚೆಲ್ಲಿದ
ಮೌನ ಮುಸ್ಸಂಜೆಯ ಕರಾವಳಿಯ ಪ್ರಾದೇಶಿಕ ವಿವರಗಳಿಂದ ಕಥೆಗಾರ್ತಿ ಕಟ್ಟಿದ ಪರಿಸರ ಜೀವಂತವಾಗಿದೆ.
ಉತ್ತರ