ಪುಸ್ತಕದ ಬಗ್ಗೆ: ಕೆರೆಯ ನೋಡಿರೋ ( ಮುಚ್ಚದಿರಲಿ ಜಲದ ಕಣ್ಣು)
ಕೆರೆ ಜಾಗೃತಿ ಕಾರ್ಯಕ್ರಮಗಳಲ್ಲಿ 'ಕೆರೆಯ ಹೂಳಿಗಿಂತ ಮುಂಚೆ ತಲೆಯ ಹೂಳು ತೆಗೆಯಬೇಕು' ಎಂದು ೨೫
ವರ್ಷಗಳ ಹಿಂದೆ ನುಡಿದವರು ಬರಹಗಾರ ಶಿವಾನಂದ ಕಳವೆ. ಕರ್ನಾಟಕದ ಪುರಾತನ ಕೆರೆ ವೀಕ್ಷಣೆ, ಕಣಿವೆ
ಕೆರೆ ನಿರ್ಮಾಣ, ಜನಸಹಭಾಗಿತ್ವದಲ್ಲಿ ಕೆರೆ ಪುನರುಜ್ಜಿವನದ ಅನುಭವದಲ್ಲಿ ಬೆಳೆದವರು. ಬೀದರ್
ಜಿಲ್ಲೆಯ ಅಲಿಯಂಬರದಿಂದ ಕೊಳ್ಳೇಗಾಲದ ಕೋಟೆಕೆರೆಯವರೆಗೆ ಹಲವು ತಿಂಗಳು ಕೆರೆ ವೀಕ್ಷಣೆಯ ಪಯಣದಲ್ಲಿ
ಜನಪದರ ಬದುಕು ಅರಿಯುತ್ತ ಸಹಸ್ರಾರು ಕೆರೆಗಳ ಪ್ರತ್ಯಕ್ಷ ದರ್ಶನ ಪಡೆದವರು. ರಾಜ್ಯದ ಕೆರೆ
ಪುನಶ್ವೇತನ ಕಾರ್ಯಗಳಿಗೆ ಸಮುದಾಯ, ಸರಕಾರಕ್ಕೆ ನಿರಂತರ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ.
ಹಳ್ಳಿಗರು, ಉದ್ಯಮಿಗಳು, ಸಿನೆಮಾ ನಟರು, ಸಂಘ ಸಂಸ್ಥೆಗಳು, ಸಾಧುಸಂತರು, ರಾಜಕೀಯ ನೇತಾರರು,
ಸಚಿವರು ಸೇರಿದಂತೆ ಕೆರೆಯ ಕೆಲಸ ಎಲ್ಲರ ಕೆಲಸವೆನ್ನುತ್ತ ಮಹತ್ವದ ಕಾರ್ಯವನ್ನು ಅದೆಷ್ಟು ಜನರ
ಜೊತೆಗೆ ಮಾಡಿದ್ದಾರೆಂಬುದೇ ಕೃತಿಯ ಅಚ್ಚರಿ. ಕಳೆದ ೨೦ ವರ್ಷಗಳಲ್ಲಿ ನೀರಿನ ಮಾತು ಕೇಳಲು ಇವರ ಊರು
ಕಳವೆಗೆ ಯಾರೆಲ್ಲ ಬಂದಿದ್ದಾರೆಂಬುದು ಕಾಯಕ ಪ್ರೀತಿಗೆ ಸಾಕ್ಷಿ. ಕೃಷಿ, ಕಾಡು, ನದಿಗಳ ಕುರಿತ
ಕಳವೆಯವರ ದೇಸಿ ಜ್ಞಾನ ಮಾರ್ಗ