Get this at ₹ 167Extra 5% OffAdd items worth ₹999 to the cart & get extra 5% off
Get this at ₹ 158Extra 10% OffAdd items worth ₹1499 to the cart & get extra 10% off
Product Specifications
Book Summary
ಪುಸ್ತಕದ ಬಗ್ಗೆ: ಜೀವನ್ಮುಖಿ
'ಜೀವನ್ಮುಖಿ', ಕಥಾಸಂಕಲನ ಎಂದಿನಂತೆ ವಸುಮತಿ ಉಡುಪರ ನಿರಾಡಂಬರ ಶೈಲಿಯ ಆದರೆ ಮನಮುಟ್ಟುವ
ಕತೆಗಳನ್ನು ಒಳಗೊಂಡಿದೆ. ಬದುಕಿನ ಅನಿಶ್ಚಯತೆ, ನಿಗೂಢತೆಯನ್ನು ಹೇಳುವ ಈ ಕತೆಗಳ ಕಥಾವಸ್ತು,
ನಮ್ಮನ್ನು ಬಾಳಿನ ಕಟು ಸತ್ಯದೆಡೆಗೆ ಕಣ್ಣುತಿರುಗಿಸುವಂತೆ ಮಾಡಬಲ್ಲ ಶಕ್ತಿಯುಳ್ಳದ್ದು.
ಆದರೆ ಎಲ್ಲೂ ವಾಸ್ತವತೆಗೆ ಧಕ್ಕೆ ಬರದಂತೆ ಸಂದರ್ಭಕ್ಕನುಸಾರವಾಗಿ ಪ್ರತಿಸ್ಪಂದಿಸುವ ಇಲ್ಲಿನ
ಪಾತ್ರಗಳು ತಳೆಯುವ ಗಟ್ಟಿ ನಿಲುವು ಜೀವನ್ಮುಖಿಯಾದದ್ದು.
ಕಷ್ಟಗಳ ಕಾರ್ಮೋಡ ಎದುರಾದಾಗಲೂ ಬೆಳ್ಳಿಮಿಂಚಿನ ಹಾದಿಯಲ್ಲೇ ದಡಸೇರಲು ಹೋರಾಡುವಂತದ್ದು. ಲೇಖಕಿಯೇ
ಹೇಳುವಂತೆ ಬದುಕಿನ ನಾನಾ ಮಜಲುಗಳಿಗೆ ಕೊಟ್ಟಿರುವ ಕಥಾರೂಪ ಇಲ್ಲಿನ ಕತೆಗಳು.