ಪುಸ್ತಕದ ಬಗ್ಗೆ: ಇದೊಳ್ಳೆ ಪುರಾಣ
ನಮ್ಮ ಪುರಾಣೇತಿಹಾಸಗಳು ವಿಭಿನ್ನತೆಯ ತವರು.
ಇಲ್ಲಿಯ ಕಥೆಗಳು ವಿಶಿಷ್ಟವಾಗಿರುವಂತೆ ವಿನೂತನವಾಗಿಯೂ ಕಾಣಿಸಿಕೊಳ್ಳುತ್ತವೆ.
ನಾವು ಯೋಚಿಸದ ತಿರುವುಗಳು ಇಲ್ಲಿವೆ.
ಅನೂಹ್ಯ ಅಸಂಭವಗಳೆಲ್ಲ ಇಲ್ಲಿ ಸಂಭವ.
ಚಿತ್ರ-ವಿಚಿತ್ರವಾದ ವ್ಯಕ್ತಿಗಳನ್ನೂ ನಾವಿಲ್ಲಿ ಕಾಣಬಹುದು.
ಪುರಾಣೇತಿಹಾಸಗಳ ಹಲವು ವ್ಯಕ್ತಿಗಳು ಪ್ರಸಿದ್ಧ.
ಅನೇಕ ಕಥೆ-ಘಟನೆಗಳೂ ಪ್ರಸಿದ್ಧವೇ.
ಇಲ್ಲಿ ಪ್ರಸಿದ್ಧವಾಗದ ಒಂದು ಪ್ರಪಂಚವಿದೆ.
ಅಲ್ಲಿಯ ಸ್ವಾರಸ್ಯ ಇನ್ನೂ ಹೆಚ್ಚಿನದ್ದು.
ಅಂಥ ಊಹಿಸಲಾಗದ ನಡೆಯ ಕಥೆಗಳು ಈ ಕೃತಿಯ ವಸ್ತು.
ಲೇಖಕಿ ಅಶ್ವಿನಿ ಕುಲಕರ್ಣಿ ಅಂಥವನ್ನು ಆರಿಸಿ ಇಲ್ಲಿ ಜೋಡಿಸಿದ್ದಾರೆ.
ಜೊತೆಗೆ ಮಾಹಿತಿ-ಮೌಲ್ಯ-ತಾತ್ತ್ವಿಕತೆಗಳ ಮೇಲನವೂ ಇಲ್ಲಿದೆ.
ಅವರ ಭಾಷೆ ಸರಳತೆ-ಸಹಜತೆಗಳಿಂದಾಗಿ ಸೊಗಸಾಗಿದೆ.
ಇದೊಂದು ಓದಬೇಕಾದ ಮತ್ತು ಕಾಪಿಟ್ಟುಕೊಳ್ಳಬೇಕಾದ ಕೃತಿ
ಎಂಬುದರಲ್ಲಿ ಸಂಶಯವಿಲ್ಲ.
ವಿದ್ವಾನ್ ಜಗದೀಶಶರ್ಮಾ ಸಂಪ