ಪುಸ್ತಕದ ಬಗ್ಗೆ : ಹಣ ಏನಿದು ನಿನ್ನ ವಿಚಿತ್ರ ಗುಣ!
ನಿಮಗೆಲ್ಲಾ ಆನೆಯ ಕಥೆ ಗೊತ್ತಿರುತ್ತದೆ ಎಂದು ಭಾವಿಸುವೆ.
ಒಂದು ಮರಿ ಆನೆಯ ಕಾಲಿಗೆ ಸರಪಳಿಯನ್ನು ಬಿಗಿದು ಮರಕ್ಕೆ ಕಟ್ಟಿಹಾಕುತ್ತಾರೆ. ಅದು ಬಿಡಿಸಿಕೊಳ್ಳಲು
ಹಲವು ಪ್ರಯತ್ನ ಮಾಡುತ್ತದೆ, ಅದರಲ್ಲಿ ವಿಫಲವಾಗುತ್ತದೆ. ಸಮಯ ಕಳೆಯುತ್ತದೆ. ಆನೆ ಈಗ
ಬೃಹದಾಕಾರವಾಗಿ ಬೆಳೆದು ನಿಂತಿದೆ. ಅದೇ ಮರಕ್ಕೆ, ಅದೇ ಸರಪಳಿಯಲ್ಲಿ ಆನೆಯನ್ನು ಬಂಧಿಸಿ
ಇಡಲಾಗಿದೆ. ಆನೆ ಮನಸ್ಸು ಮಾಡಿದರೆ ಮರವನ್ನೇ ಕಿತ್ತು ಬಿಸಾಡಬಹುದು. ಆದರೂ ಅದು ಏನೂ ಮಾಡದೆ ಸರಪಳಿ
ಕಟ್ಟನ್ನು ಒಪ್ಪಿಕೊಂಡು ಬಂಧಿಯಾಗಿದೆ. ಈ ಕಥೆಯನ್ನು ನಾವೆಲ್ಲರೂ ಸ್ವಲ್ಪ ನಮ್ಮ ಬದುಕಿಗೆ, ವೆಲ್ತ್
ಕ್ರಿಯೇಷನ್ ಬಗ್ಗೆ ತಳುಕು ಹಾಕಿ ನೋಡೋಣವೇ?
ನಮ್ಮಲ್ಲಿನ ವ್ಯವಸ್ಥೆ, ಹಣಕಾಸು ಬಗೆಗಿನ ಭಾವನೆಗಳು ಸದಾ ನಮ್ಮನ್ನು ಬಡತನದಲ್ಲಿರಿಸುವ ಅಂಶಗಳನ್ನು
ಹೊಂದಿವೆ. ನಮ್ಮನ್ನು ಬಡವರನ್ನಾಗೇ ಉಳಿಸಲು ನಡೆದಿದೆ ಹುನ್ನಾರ! ಶ್ರೀಮಂತರಾಗಲು ಈ
ಪುಸ್ತಕದಲ್ಲಿದೆ ಪರಿಹಾರ!! ಹೌದು, ನೀವು ನಿಜಕ್ಕೂ ಇಲ್ಲಿನ ಅಂಶಗಳನ್ನು ಓದಿ, ಅಳವಡಿಸಿಕೊಂಡಿದ್ದೇ
ಆದರೆ, ಚಿಂತನೆಗಳನ್ನು ಬದಲಿಸಿಕೊಂಡಿದ್ದೇ ಆದರೆ, ನಮ್ಮ ಹಣೆಬರಹವನ್ನು ಕೂಡ ಬದಲಿಸಿಕೊಳ್ಳಬಹುದು.
ಆನೆಗೆ ಮರವನ್ನು ಕಿತ್ತೊಗೆಯುವ ಶಕ್ತಿ ಇದ್ದರೂ ಅದು ತನ್ನ ಶಕ್ತಿಯನ್ನು