Hallege Banda Hakki
153
170
(10% Off)
Inclusive of all taxes
Qty
Buying in bulk?
In Stock
Guaranteed Service
Free Home Delivery
above ₹199
Check Delivery
We have a problem
  • Your form could not be submitted, try again later.
Enter pincode for exact delivery dates / charges and to know if express delivery is available

Hallege Banda Hakki

by B R Lakshman Rao (Author),
Ankita Pustaka (Publisher)
Product Specifications
Book Description
ಪುಸ್ತಕದ ಬಗ್ಗೆ : ಹಲ್ಲೆಗೆ ಬಂದ ಹಕ್ಕಿ ಬಿ.ಆರ್. ಲಕ್ಷ್ಮಣರಾಯರ ಕವಿತೆಗಳು ಬರಿಯ ಪದ್ಯಗಳಲ್ಲ; ಕವಿಯ ರೂಪಕ ಚಿತ್ರ ಶಾಲೆಯಂತೆ ಅವು ನಮ್ಮೊಳಗೆ ಇಳಿಯುತ್ತವೆ. ಪ್ರೀತಿ, ನೋವು, ಸಾಂಗತ್ಯ, ವಿರಹ, ಗೆಲುವು, ಸೋಲು, ಸಾವಿನ ಕುರಿತೂ ಒಂದು ಸಣ್ಣ ನಗೆಯೊಂದಿಗೆ ಮಾತನಾಡುವ ಅವರ ಕವಿತೆಗಳಲ್ಲಿ ಕವಿಗಿಂತ ಹೆಚ್ಚಾಗಿ ಒಬ್ಬ ಸಹಜ ಜೀವೋಲ್ಲಾಸದ ಸ್ನೇಹಿತ ಕಾಣಿಸುತ್ತಾನೆ. ತನ್ನದೇ ರೀತಿಯಲ್ಲಿ ಬದುಕಿದ ಅನುಭವವನ್ನು ಯಾವುದೇ ಮುಚ್ಚುಮರೆಯಿಲ್ಲದೆ ಓದುಗರ ಮುಂದೆ ಇಡುವ ಈ ಕವಿತೆಗಳು, ಕೊನೆಗೆ ಓದುಗರದೇ ಅನುಭವಗಳಾಗಿ ಮಾರ್ಪಡುತ್ತವೆ. ಕೆಲವು ಸಾಲುಗಳ ಬಳಿ ನಾವು ನಿಂತು, “ಇದು ನನ್ನ ಮಾತೂ ಹೌದಲ್ಲ!” ಎಂದುಕೊಳ್ಳುತ್ತೇವೆ. ತನ್ನನ್ನು ಪೂರ್ತಿಯಾಗಿ ಕವಿತೆಗೆ ಒಪ್ಪಿಸಿಕೊಂಡವರು ಬಿ.ಆರ್.ಲಕ್ಷ್ಮಣರಾವ್. ಆಗೊಮ್ಮೆ ಈಗೊಮ್ಮೆ ಅವರು ಕಾವ್ಯ ಪಾತಿವ್ರತ್ಯದ ಹೊಸಿಲು ದಾಟಿದ್ದಾರೆ ನಿಜ. ಆದರೆ ಅವರ ಇತರ ಬರಹಗಳೂ ಕಾವ್ಯದ ಸುತ್ತಲೇ ಸುಳಿಯುತ್ತವೆ. ಲಯ ಮತ್ತು ಅರ್ಥ ಒಂದಾಗಿರುವ ಅರ್ಧನಾರೀಶ್ವರ ಪ್ರತಿಮೆಯಂತೆ ಅವರ ಕವಿತೆಗಳು ನಮ್ಮನ್ನು ಎದುರುಗೊಳ್ಳುತ್ತವೆ, ಮುದಗೊಳಿಸುತ್ತವೆ. ಹೀಗಾಗಿಯೇ ಅವರ ಪದ್ಯಗಳನ್ನು ಓದಿದವರಿಗೆ ಬಿಆರೆಲ್ ಕವಿತೆಗಳ ಹಕ್ಕುಸ್ವಾಮ್ಯ ಕವಿಯದು; ಭಾವಸ್ವಾಮ್ಯ ಮಾತ್ರ ತಮ್ಮದು ಅಂತ ಅನ್ನಿಸುತ್ತದೆ. ಜೋಗಿ
Book Specifications
ISBN-13 9789348262455
Language Kannada
Binding Paper Back
Publisher Ankita Pustaka
Publishing Date 2026-09-20