ಪುಸ್ತಕದ ಬಗ್ಗೆ : ಜಿಪ್ಸಿ ಜೀತು
ಕರ್ನಾಟಕದ ಪುಟ್ಟ ಹಳ್ಳಿಯಾದ ಮಲ್ಲಿಗೆಪೇಟೆಯಲ್ಲಿ ನಾಪತ್ತೆ ಪ್ರಕರಣವೊಂದು ಅಚಾನಕ್ಕಾಗಿ ಸದ್ದು
ಮಾಡುತ್ತದೆ. ಕಾದಂಬರಿಯ ಕಥಾನಾಯಕನಾದ, ತನ್ನ ಗೆಳೆಯರ ಬಳಗದಲ್ಲಿ ಜೀತೂ ಎಂದೇ ಕರೆಯಲ್ಪಡುವ 11
ವರ್ಷ ಪ್ರಾಯದ ಅಜಿತ್ ಏಕಾಏಕಿ ಕಾಣೆಯಾಗಿದ್ದಾನೆ. ಪ್ರವಾಸ-ತಿರುಗಾಟಗಳಲ್ಲಿ ವಿಪರೀತವೆಂಬಷ್ಟು
ಒಲವಿದ್ದ, ಆದರೆ ಶಿಸ್ತಿನ ಬಾಲಕನಾಗಿದ್ದ ಜೀತು ಹೀಗೆ ಕಾಣೆಯಾಗುವುದೇ ಒಂದು ವಿಚಿತ್ರ. ಜೀತೂನ
ಸಹಪಾಠಿಗಳೂ, ಖಾಸಾ ಗೆಳೆಯರೂ ಆಗಿದ್ದ ಸಬಾ, ರಿಷಿ ಮತ್ತು ಚಿಂಟುರನ್ನೊಳಗೊಂಡಂತೆ ಇಡೀ
ಮಲ್ಲಿಗೆಪೇಟೆಯನ್ನೇ ಅಚ್ಚರಿಯಲ್ಲಿ ಕೆಡವಿತ್ತು ಈ ಘಟನೆ.
ಅಷ್ಟಕ್ಕೂ ಈ ಜೀತು ಎಲ್ಲಿ ಮಾಯವಾಗಿದ್ದ? ಅವನು ಅಪಾಯದಲ್ಲಿದ್ದನೇ? ಕಾಣೆಯಾಗಿದ್ದ ಜೀತೂನನ್ನು
ಹುಡುಕಲು ಅವನ ಗೆಳೆಯರಾದ ಸಬಾ, ರಿಷಿ ಮತ್ತು ಚಿಂಟು ಯಶಸ್ವಿಯಾದರೇ? ತಮ್ಮ ಗೆಳೆಯನ ಪತ್ತೆಗಾಗಿ
ಮಲ್ಲಿಗೆಪೇಟೆಯ ಈ ಮೂವರು ಗೆಳೆಯರು ಸ್ಥಳೀಯ ಪೋಲೀಸರೊಂದಿಗೆ ಹೇಗೆ ತನಿಖೆಯಲ್ಲಿ ತೊಡಗಿಸಿಕೊಂಡರು?
ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾಗಳೆಂಬ ಹೊಸ ಹಾದಿಗಳನ್ನು ಈ ಮಿಸ್ಸಿಂಗ್ ಪ್ರಕರಣದಲ್ಲಿ
ಮಲ್ಲಿಗೆಪೇಟೆಯ ಪೋಲೀಸರು ಮತ್ತು ಚಿಣ್ಣರು ಹೇಗೆ ಬಳಸಿಕೊಂಡರು?
ಸುತ್ತ ತೆರೆದುಕೊಳ್ಳುವ ಜೀತು ಮತ್ತು ಗೆಳೆಯರ ರೋಚಕ ಕಾದಂಬರಿ...
ಓದಿ "ಜಿಪ್ಸಿ ಜೀತು"..