ಪುಸ್ತಕದ ಬಗ್ಗೆ :
ಈಜಿಪ್ಟ್ ಗೆ ಹೋಗಬೇಕು, ಪಿರಮಿಡ್ಡುಗಳನ್ನು ಕಾಣಬೇಕು ಎನ್ನುವುದು ಪ್ಲಾನ್ ಮಾಡಿ ಆದದ್ದಲ್ಲ.
ಈಜಿಪ್ಟ್ ನನ್ನ ಪವಾಸದ 69ನೇ ದೇಶ. ಈಜಿಪ್ಟ್ ಅಂತಲ್ಲ, ಉಳಿದ 68 ದೇಶಗಳು ಕೂಡ ಪ್ಲಾನ್ ಮಾಡಿ
ಆದದ್ದಲ್ಲ. ನಾನು ಯಾವತ್ತೂ, ಯಾವುದನ್ನೂ ಬಯಸಿದವನಲ್ಲ. ಬಯಸಿದ ಮಾತ್ರಕ್ಕೆ ಸಿಗುವ ಬದುಕು ನನ್ನದು
ಆಗಿರಲಿಲ್ಲ. ಹಾಸಿ ಹೊದ್ದುಕೊಳ್ಳುವ ಬಡತನ ಅಡ್ಜಸ್ಟ್ ಮಾಡುವುದನ್ನು ಚೆನ್ನಾಗಿ ಕಲಿಸಿ
ಬಿಟ್ಟಿತ್ತು. ಹೀಗಾಗಿ ಹಿಂದಿ ಭಾಷಿಕರು ಹೇಳುವಂತೆ `ಔಕಾತ್ ಮೇ ರಹೇ' ಎಂದು ಮನಸ್ಸಿಗೆ
ಹೇಳಿಬಿಟ್ಟಿದ್ದೆ. ಅಟ್ಟಕ್ಕೆ ಏಣಿ ಹಾಕಬಹುದು, ಆಕಾಶಕ್ಕೆ ಏಣಿ ಹಾಕಿದರೆ ಹೇಗೆ? ಆಕಾಶಕ್ಕೆ ಏಣಿ
ಹಾಕಲು ಸಾಧ್ಯವೇ? ಒಪ್ಪತ್ತಿನ ಊಟಕ್ಕೇ ತಡಕಾಡುವ ಸಮಯದಲ್ಲಿ ವಿದೇಶ ಪ್ರವಾಸದ ಕನಸು ಕಾಣುವುದು
ಅಪರಾಧ, ಆಕಾಶಕ್ಕೆ ಏಣಿ ಹಾಕಿದಂತೆ ಎನ್ನುವುದು ಗೊತ್ತಾಗಿತ್ತು. ಹೀಗಾಗಿ ಪ್ರಾಕ್ಟಿಕಲ್
ಆಗಿರುವುದು ಕಲಿತು ಬಿಟ್ಟಿದ್ದೆ. ಈ ಎಲ್ಲಾ ಕಾರಣದಿಂದ ನಾನೊಬ್ಬ ಡೆಸ್ಟಿನಿ ಕಿಡ್. ಸ್ಲಂ
ಹುಡುಗನೊಬ್ಬ ಗಾಡ್ ಫಾದರ್‌ಗಳಿಲ್ಲದೆ ಕೇವಲ ದೈವ ಅನುಗ್ರಹ ಮತ್ತು ಶ್ರಮದ ಫಲದಿಂದ 69 ದೇಶಗಳನ್ನು
ಸುತ್ತಿದ ಎಂದು ಬಾಲಿವುಡ್‌ನವರು ಚಿತ್ರ ಮಾಡದ್ದಿರೆ, ಎಲ್ಲರಿಗಿಂತ ಮುಂಚೆ ಇವೆಲ್ಲಾ