ಪುಸ್ತಕದ ಬಗ್ಗೆ: ಬದುಕು ಮತ್ತು ಉದ್ಯೋಗವನ್ನು ಆನಂದಿಸುವುದು ಹೇಗೆ?
ನಿಮ್ಮ ಚಿಂತೆಗಳನ್ನು ದೂರ ಮಾಡಿ ವೃತ್ತಿಬದುಕಿನಲ್ಲಿ ಉಪಯುಕ್ತವಾದುದನ್ನು ಸಾಧಿಸಲು ಮತ್ತು ಒಂದು
ಪರಿಪೂರ್ಣ ಜೀವನ ನಡೆಸಲು ಡೇಲ್ ಕಾರ್ನೆಗಿಯ ಆಯ್ದ ಉತ್ತಮ ಕೃತಿಗಳಾದ ಸ್ನೇಹಿತರನ್ನು ಗಳಿಸುವುದು
ಹೇಗೆ, ಜನರನ್ನು ಪ್ರಭಾವಿಸುವುದು ಹೇಗೆ, ಚಿಂತೆ ದೂರ ಮಾಡಿ ಉತ್ತಮ ಜೀವನ ನಡೆಸುವುದು ಹೇಗೆ,
ಬದುಕು ಮತ್ತು ಉದ್ಯೋಗವನ್ನು ಆನಂದಿಸುವುದು ಹೇಗೆ? ಎಂಬಿತ್ಯಾದಿ ಉಪಯುಕ್ತವಾಗುವುದರಲ್ಲಿ
ಸಂಶಯವಿಲ್ಲ.
ಈ ಕೃತಿಯು..
* ಪ್ರಸ್ತುತ ಉದ್ಯೋಗದಲ್ಲಿ ತೃಪ್ತಿಯನ್ನು ಅರಸುವುದು ಹೇಗೆ?
* ನಿಮ್ಮ ಸ್ವಂತ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?
* ನಿರುತ್ಸಾಹ ಮತ್ತು ಹತಾಶೆಯಿಂದ ಹೊರಬರುವುದು ಹೇಗೆ?
* ಜೀವನ ಮತ್ತು ಉದ್ಯೋಗವನ್ನು ಸರಿದೂಗಿಸಿಕೊಂಡು ಹೋಗುವುದು ಹೇಗೆ? ಎಂಬುದನ್ನು
ತಿಳಿಸಿಕೊಡುತ್ತದೆ.
ಜಗತ್ತಿನಾದ್ಯಂತ ಇರುವ ಲಕ್ಷಾಂತರ ಓದುಗರನ್ನು ಈ ಕೃತಿ ಪ್ರಭಾವಿಸಿದೆ. ನಿಮ್ಮ ವೈಯಕ್ತಿಕ ಬದುಕು
ಮತ್ತು ವೃತ್ತಿ ಜೀವನದಲ್ಲಿ ಗೆಲುವು ಸಾಧಿಸಲು ಈ ಕೃತಿ ಒಂದು ಕೀಲಿ ಕೈಯಂತೆ ಒದಗಿ ಬರುವುದರಲ್ಲಿ
ಯಾವ ಅನುಮಾನವೂ ಇಲ್ಲ.
ಕನ್ನಡದ ಹೆಸರಾಂತ ಕವಿ ಸಾಹಿತಿಗಳಾಗಿರುವ ಡಾ. ವಸಂತಕುಮಾರ ಪೆರ್ಲ ಅವರು ಸೊಗಸಾಗಿ ಈ ಕೃತಿಯನ್ನು
ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.