ಪುಸ್ತಕದ ಬಗ್ಗೆ :ಅದೃಷ್ಟವಂತನ ಆತ್ಮಕಥೆ
ಚೀಮಂಗಲದಿಂದ ಪ್ರಾರಂಭವಾಗುವ ಬಿಆರೆಲ್ ಅವರ ಆತ್ಮಕಥನ ಮಂಗಳಕರವಾಗೇ ಸಾಗಿಬರುವುದು ಶೀರ್ಷಿಕೆಯನ್ನು
ಅನ್ವರ್ಥಕಗೊಳಿಸು ವಂತಿದೆ. “ಖುಷಿ ಇಲ್ಲದವನು ಕವಿಯಾಗಲಾರ” ಎಂಬ ಜೀಯೆಸ್ಸೆಸ್ ಅರ್ಥಗರ್ಭಿತ
ಮಾತಿನಂತೆ ಬಿಆರೆಲ್ ವ್ಯಕ್ತಿತ್ವ. ಇವರು ನಿಜಕ್ಕೂ 'ಭರವಸೆಯ ಪ್ರವಾದಿ', ಆತ್ಮಕಥನದುದ್ದಕ್ಕೂ ಅವರ
ಕುಟುಂಬವಾತ್ಸಲ್ಯ, ಸ್ನೇಹಶೀಲತೆ, ಪ್ರೀತಿ, ಲವಲವಿಕೆ, ನೇರವಂತಿಕೆ, ಜಂಗಮಗುಣ ಅದೃಷ್ಟವಂತನ
ಆತ್ಮಕಥೆ ಎದ್ದು ಕಾಣುತ್ತದೆ.
ನವ್ಯಸಾಹಿತ್ಯದ ಉಚ್ಚಾಯ ಕಾಲದಲ್ಲಿ ಬರೆಯಲಾರಂಭಿಸಿದ ಬಿಆರೆಲ್ ಒಂದು ರೀತಿಯಲ್ಲಿ ಆ ಘಟ್ಟಕ್ಕೆ
ಸಾಕ್ಷಿಪ್ರಜ್ಞೆಯಾಗಿ ನಿಂತವರು. ಅನೇಕ ಹಿರಿಯರ, ಕನ್ನಡದ ಶ್ರೇಷ್ಠ ಮನಸ್ಸುಗಳ ಒಡನಾಟ, ನಿರ್ವ್ಯಾಜ
ಪ್ರೀತಿ, ಪ್ರೋತ್ಸಾಹವನ್ನು ಪಡೆದವರು. ಅಕ್ಷರ ಹೊಸ ಕಾವ್ಯ'ದಿಂದ ಪ್ರಾರಂಭವಾಗಿ 'ಹಕ್ಕೆಗೆ ಬಂದ
ಹಕ್ಕಿ'ವರೆಗೆ ನಿರಂತರವಾಗಿ ಸಾಗಿಬಂದ ಇವರ ಕಾವ್ಯಪಯಣ, ಕನ್ನಡ ಕಾವ್ಯಜಗತ್ತು ಪಡೆದುಕೊಂಡ ವಿಭಿನ್ನ
ನೆಲೆಗಳನ್ನು ಹೇಳುವಂತದ್ದು. ಕಾವ್ಯ ಮಾತ್ರವಲ್ಲದೆ ಗದ್ಯದ ವಿವಿಧ ಪ್ರಕಾರಗಳಲ್ಲಿ ಬಿಆರೆಲ್
ಬರವಣಿಗೆ ಗಮನಾರ್ಹವಾದುದು. ಸ್ವತಃ ಉತ್ತಮ ಗಾಯಕರಾದ, ಕನ್ನಡ ಸುಗಮ ಸಂಗೀತ ಕ್ಷೇತ್ರವನ್ನು
ಬೆಳೆಸಿದ, ಬೆಳಗಿದ ಜನಮನದ ಪ್ರೀತಿಯ ಕವಿಯಾಗಿಯೂ ಇವರ ಸಾಧನೆ ಪ್ರಮುಖವಾದದ್ದು. ಹಾದಿಯುದ್ದಕ್ಕೂ
ಅದೃಷ್ಟದ ಬೆನ್ನೇರಿ ಬಂದರೂ ವಾಸ್ತವಪ್ರಜ್ಞೆ ಮರೆಯದ ನೇರ, ನಿಷ್ಪಕ್ಷಪಾತ ದೃಷ್ಟಿಕೋನ ಇವರದು. ಈ
ಅಜೇಯತಾವಾದಿಗೆ 'ಇಹದ